ಇವತ್ತು ಒಂದು ಜಾವಾ [JAVA] ಪ್ರೋಗ್ರಾಮ್ compile ಮಾಡಿ execute ಮಾಡೋದ್ ಹೇಗೆ ಅಂತ ನೋಡೋಣ.

ಮೊದಲಿಗೆ ಒಂದು JAVA ಪ್ರೋಗ್ರಾಮ್ RUN ಆಗಬೇಕು ಅಂದ್ರೆ ನಮ್ಮ SYSTEM ಅಲ್ಲಿ JAVA DEVELOPMENT KIT [JDK], JAVA SE RUN TIME ENVIRONMENT [JRE] ಇದ್ದೀಯ ಅಂತ ನೋಡಬೇಕು.

ಹೇಗಪ್ಪಾ ಇದ್ದೀಯ ಇಲ್ವಾ ಅಂತ ನೋಡೋದು ಅಂದ್ರ?

  1. ಮೊದಲಿಗೆ WINDOWS ಬಟನ್ ಒತ್ತಿ. ಅಲ್ಲಿ JAVA ಅಂತ ಟೈಪ್ ಮಾಡಿ. JAVA ಅಂತ ತೋರಿಸ್ತಿದೆ ಅಂದ್ರೆ COMPUTER ಅಲ್ಲಿ JAVA install ಆಗಿದೆ ಅಂತ ಅರ್ಥ.
  2. ಅಥವಾ windows > control panel > programs > ಇಲ್ಲಿ ನಮಗೆ JAVA ಅಂತ ತೋರಿಸ್ತಿದೆ ಅಂದ್ರೆ JAVA install ಆಗಿದೆ ಅಂತ.
  3. ಅಥವಾ WINDOWS ಬಟನ್ ಒತ್ತಿ ಅಲ್ಲಿ CMD ಅಂತ type ಮಾಡಿ command prompt ತೆರೆದುಕೊಂಡಾಗ ಅಲ್ಲಿ ಈ ಕಮಾಂಡ್ ಕೊಡಿ

java -version

ಇದು ನಮಗೆ ಯಾವ ಜಾವಾ version install ಆಗಿದೆ ಅಂತ ತೋರಿಸುತ್ತೆ. ಇದರ ಜೊತೆ JRE ವರ್ಷನ್ ಯಾವ್ದು ಅನ್ನೋದು ತೋರಿಸುತ್ತೆ.

ಅಕಸ್ಮಾತಾಗಿ JAVA install ಆಗಿಲ್ಲ ಅಂದ್ರೆ ನೀವು ಜಾವಾ install ಮಾಡಿಕೊಳ್ಳಬೇಕಾಗುತ್ತೆ. install ಮಾಡಿಕೊಳ್ಳಲು ಈ ಅಕ್ಷರಗಳ ಮೇಲೆ ಒತ್ತಿ.

INSTALL ಆದ್ಮೇಲೆ PATH ನೀವೇನಾದ್ರು  ಬದಲಾಯಿಸಿಲ್ಲ ಅಂದ್ರೆ PATH ಹೀಗಿರುತ್ತೆ

C:\Program Files\Java\jdk1.8.0_74\bin

JAVA ಪ್ರೋಗ್ರಾಮ್ COMPILE ಆಗುತ್ತೋ ಇಲ್ಲವೋ ಎಂದು ಟೆಸ್ಟ್ ಮಾಡಲು ಈ COMMANDS ಬಳಸಿ.

C:\>anywhere on system>cd\

C: \> cd Program Files\java\jdk_version\bin

C:\Program Files\java\jdk_version\bin> javac

ಜಾವಾ ಪ್ರೋಗ್ರಾಮ್ ಬರೆಯುವುದಕ್ಕೆ ನಮಗೆ ಒಂದು TEXT EDITOR ಬೇಕು. TEXT EDITOR ಯಾವುದಾದ್ರೂ ಪರವಾಗಿಲ್ಲ. ಎಲ್ಲ COMPUTER ಅಲ್ಲೂ NOTEPAD ಮೊದಲೇ INSTALL ಆಗಿರುತ್ತೆ, ನಾವು ಅದನ್ನೇ ಬಳಸೋಣ.

COMPILE ಮಾಡಿ EXECUTE ಮಾಡೋದು ಹೇಗೆ?

ಮೊದಲಿಗೆ NOTEPAD ಅಲ್ಲಿ ಈ “HELLO WORLD” ಪ್ರೋಗ್ರಾಮ್ ಟೈಪ್ ಮಾಡಿ.

class hello{

public static void main(String a[]){

System.out.println(“Hello World!!”);

}

}

ಟೈಪ್ ಮಾಡಿದ ಮೇಲೆ SAVE AS filename .java ಅಂತ save ಮಾಡಿ. ಯಾವ CLASS ಒಳಗೆ MAIN FUNCTION ಬರೆದಿರ್ತೀರೋ ಆ class name ಇಂದ save ಮಾಡೋದು ಒಳ್ಳೆ ಅಭ್ಯಾಸ.

ಇಲ್ಲಿ ನಾವು hello.java ಅಂತ save ಮಾಡಿಕೊಳ್ಳೋಣ

ಈಗ ನಾವು java ಪ್ರೋಗ್ರಾಮ್ ಬರೆದು ಆಯ್ತು. ಇದನ್ನ COMPILE ಮಾಡ್ಬೇಕು. ಹೇಗಪ್ಪಾ ಅದು ಅಂತ ಯೋಚ್ನೆ ಮಾಡ್ತಿದ್ರೆ ನಿಮ್ ಯೋಚನೆ ನನಗೆ ಬಿಡಿ.

ಮೊದಲು cmd prompt ಓಪನ್ ಮಾಡಿ ಅಲ್ಲಿ jdk\bin ಫೋಲ್ಡರ್ ಎಲ್ಲಿದೆ ಅಂತ ನೋಡಿ. ಅಲ್ಲಿಗೆ path set ಮಾಡ್ಕೊಳ್ಳಿ. install ಮಾಡೋ ಟೈಮ್ ಅಲ್ಲಿ ನೀವ್ path ಏನು ಬದ್ಲಾಯ್ಸಿಲ್ಲ ಅಂದ್ರೆ path ಹೀಗಿರುತ್ತೆ..

C:\Program Files\Java\jdk1.8.0_74\bin

ಈಗ cmd prompt ಅಲ್ಲಿ ನೀವು ಈ LOCATION ಅಲ್ಲಿ ಇದ್ದೀರಾ.

ಈಗ TEMPORARY ಆಗಿ ನಾವು ನಮಗೆ ಬೇಕಾಗಿರೋ ಕಡೆ JAVA ಪ್ರೋಗ್ರಾಮ್ execute ಮಾಡೋಕೆ path set ಮಾಡಿಕೊಳ್ಳೋಣ. ಅದು ಹೇಗಪ್ಪಾ ಅಂದ್ರೆ

  1. cd\
  2. c:\> cd ‘ನಿಮ್ಮ folder’
  3. c:\ ನಿಮ್ಮ folder> set path= C:\Program Files\Java\jdk1.8.0_74\bin
  4. c:\ ನಿಮ್ಮ folder> javac filename.java
  5. c:\ ನಿಮ್ಮ folder> java classfilename

output ತೋರಿಸುತ್ತೆ.

ಉದಾಹರಣೆಗೆ ನಾನು desktop ಮೇಲೆ java ಅನ್ನೋ folder ಒಳಗೆ ನನ್ನ ಪ್ರೋಗ್ರಾಮ್ save ಮಾಡಿದೀನಿ ಅಂತ ಅಂದುಕೊಳ್ಳೋಣ. ಆಗ ನಾನು ಈ ರೀತಿ path set ಮಾಡ್ಬೇಕಾಗುತ್ತೆ.

  1. cd\
  2. C:\>cd users\vinay\Desktop\java
  3. C:\ users\vinay\Desktop\java> set path= C:\Program Files\Java\jdk1.8.0_74\bin
  4. C:\ users\vinay\Desktop\java> javac hello.java
  5. C:\ users\vinay\Desktop\java>java hello

Hello World!!

ಇದೆ ರೀತಿ ನೀವು ಕೂಡ ನಿಮ್ಮ folder ಎಲ್ಲಿದ್ಯೋ ಅಲ್ಲಿಗೆ path set ಮಾಡಿಕೊಳ್ಳಿ. ಇದಾದ ನಂತರ enter ಮಾಡಿದರೆ ನೀವು ನೋಡಬಹುದು ಅಲ್ಲಿ ಒಂದು class file ಬಂದಿರುತ್ತೆ. ಏನು ಈ .java file .class file ಅನ್ನೋದನ್ನ ಮುಂದಿನ ಪೋಸ್ಟ್ ಅಲ್ಲಿ ಬರೀತೀನಿ. ಈಗ ಮುಂದೆ ಏನ್ ಮಾಡಬೇಕು ಅಂತ ನೋಡೋಣ.

ಈಗ ನಿಮ್ಮ folder ಅಲ್ಲಿ filename.java ಮತ್ತೆ classname.class ಈ ಎರಡು file ಇರುತ್ತೆ. ಈಗ ನಾವು ಈ .classfile execute ಮಾಡಬೇಕು. ಏನಿಲ್ಲ java classfilename ಟೈಪ್ ಮಾಡಿ enter ಮಾಡಿ ನಿಮಗೆ cmd prompt ಮೇಲೆ ನೀವು print statement ಏನು ಕೊಟ್ಟಿದ್ರೋ ಅದು ಅಲ್ಲಿ ಪ್ರಿಂಟ್ ಆಗಿರುತ್ತೆ.

ಪರ್ಮನೆಂಟ್ ಆಗಿ ಕಂಪ್ಯೂಟರ್ ಅಲ್ಲಿ ಎಲ್ಲಿಂದ ಬೇಕಾದ್ರು JAVA ಪ್ರೋಗ್ರಾಮ್ run ಮಾಡ್ಬೇಕು ಅಂದ್ರೆ ಹೀಗ್ ಮಾಡಿ:

  1. windows ಬಟನ್ ಒತ್ತಿ
  2. computer ಅಂತ ಇದ್ಯಲ್ಲ ಅದರ ಮೇಲೆ ಒತ್ತಿ.
  3. ಅಲ್ಲಿ system properties ಅಂತ ಇದೆ ನೋಡಿ ಅಲ್ಲಿ ಒತ್ತಿ.
  4. ಅಲ್ಲಿ Advanced System Settings ಅಂತ ಇದೆ ನೋಡಿ ಅಲ್ಲಿ ಒತ್ತಿ.
  5. ಆ window ಅಲ್ಲಿ ಕೆಳಗೆ ಕೊನೆಯಲ್ಲಿ Environment Variables ಅಂತ ಬಟನ್ ಇದೆ ನೋಡಿ ಅಲ್ಲಿ ಒತ್ತಿ.
  6. ಈ window ಅಲ್ಲಿ ಮೊದಲನೇ ಭಾಗದಲ್ಲಿ user variables for —- ಅಂತ ಇದೆ ಅಲ್ವಾ ಅಲ್ಲಿ new ಬಟನ್ ಮೇಲೆ ಒತ್ತಿ variable name ಜಾಗದಲ್ಲಿ path ಅಂತ ಟೈಪ್ ಮಾಡಿ variable name ಜಾಗದಲ್ಲಿ ನಿಮ್ಮ jdk \ bin path ಇತ್ತು ಅಲ್ವಾ ಅದನ್ನ copy paste ಮಾಡಿ. ಇದಾದ ಮೇಲೆ OK ಕೊಡಿ ಎಲ್ಲವುದಕ್ಕು.

ಈಗ ನೀವು permanent path set ಮಾಡಿದಿರಾ. ಈಗ ನೀವು ಎಲ್ಲಿಂದ ಬೇಕಾದ್ರು java ಪ್ರೋಗ್ರಾಮ್ compile ಮಾಡಿ execute ಮಾಡಬಹುದು.

ಒಂದು ವೇಳೆ ನಿಮ್ಮ .java file ಒಂದು ಕಡೆ .class file ಒಂದು ಕಡೆ ಇದೆ ಅಂದ್ರೆ ಹೀಗೆ ಮಾಡಿ.

  1. cmd prompt ಅಲ್ಲಿ bin ಗೆ path set ಮಾಡಿಕೊಂಡು java -cp .classfilepath .classfilename ಅಂದ್ರೆ ಉದಾಹರಣೆಗೆ ನನ್ನ .class file d drive ಅಲ್ಲಿ abc ಅನ್ನೋ folder ಅಲ್ಲಿ ಇದೆ ಅಂದ್ರೆ ನಾನು ಈ ರೀತಿ path set ಮಾಡಬೇಕಾಗುತ್ತೆ.
  2. cd\
  3. C:\> cd Program Files\Java\jdk1.8.0_74\bin
  4. C:\Program Files\Java\jdk1.8.0_74\bin>java -cp D:\abc classfilename

Hello World!!

ಒಹ್! SOOOOPER ಕಣ್ರೀ ನೀವು ಎಷ್ಟು ಬೇಗ ಕಲಿತುಕೊಂದುಬಿಟ್ರಿ. ನಿಮಗೆ ಇದು ಅರ್ಥ ಆಗಿದೆ ಅಂದ್ರೆ ಈ ಪೋಸ್ಟ್ ಶೇರ್ ಮಾಡಿ ಬೇರೆಯವರು ಕಲಿಯಲಿ. ಶೇರ್ ಮಾಡೋಕೆ ಇಷ್ಟ ಇಲ್ಲ ಅಂದ್ರೆ ಪರವಾಗಿಲ್ಲ ನೀವು ಕಲಿತಿದ್ದನ್ನ ಬೇರೆಯವರಿಗೆ ನೀವೇ ಹೇಳಿಕೊಡಿ. ಧನ್ಯವಾದಗಳು. ಹೇಳೋದ್ ಮರೆತುಬಿಟ್ಟೆ ‘ಕಲಿತಷ್ಟು ಒಳಿತು MS ವರ್ಡ್-3’ ಅತಿ ಶೀಘ್ರದಲ್ಲಿ. ಕೊನೆ ಮಾತು ‘LIKE SHARE COMMENT ‘ ಮಾಡೋದು ಮರೆಯಬೇಡಿ. ಧನ್ಯವಾದಗಳು!!

Leave a comment